ರಾವ್ ಬಹದ್ದೂರ್ ವೈ.ಮಹಾಬಳೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯ, ದಂಡು ಪ್ರದೇಶ, ಬಳ್ಳಾರಿ-04
ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ
ದಿನಾಂಕ 20.07.2015 ರಂದು ಕಾರ್ಯಾಗಾರಗಳು ಹಾಗೂ ಉಪನ್ಯಾಸಗಳು ಹಮ್ಮಿಕೊಳ್ಳಲಾಗುವುದು
ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ದಿನಾಂಕ 20.07.2015 ರಂದು ಈ ಕೆಳಗಿನ ಕಾರ್ಯಾಗಾರಗಳು ಹಾಗೂ ಉಪನ್ಯಾಸಗಳು ಹಮ್ಮಿಕೊಳ್ಳಲಾಗುವುದು.
1. ವಿದ್ಯುತ, ವಿದ್ಯುನ್ಮಾನ ಮತ್ತು ಸಂಪರ್ಕ, ಇನ್ಸಟ್ರುಮೆಂಟೇಷನ್ ಮತ್ತು ಟೆಕ್ನಾಲಜಿ ವಿಭಾಗಗÀಳಿಂದ, ದಿನಾಂಕ 20.05.2015ರಂದು ಬೆಳಿಗ್ಗೆ 10 ಗಂಟೆಗೆ, “Circuit Analysis and Simulation” – ಎಂಬುವ 4-ದಿನದ ಕಾರ್ಯಾಗಾರದ ಉದ್ಘಾಟನಾ ಸಮಾರಂಭವು ಜರಗುವುದು. ಪ್ರೊ. ಶ್ರೀ ಚಂದ್ರಶೇಖರ, ಪ್ರೊ. ಶ್ರೀಮತಿ ರೊಹಿಣಿ ಪಾಟಿಲ್ ಈ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯಾಗಾರವನ್ನು ಉದ್ದೇಶಿಸಿ ಉಪನ್ಯಾಸವನ್ನು ನೀಡುವರು.
2. ಸಿವಿಲ್ ವಿಭಾಗದಿಂದ ದಿನಾಂಕ 20.05.2015ರಂದು ಬೆಳಿಗ್ಗೆ 09.30 ಗಂಟೆಗೆ, “Nano Technology for Civil Engg, Research in Concrete technology, Impact Dynamics”– ಎಂಬುವ ವಿಷಯಗಳ ಮೂರು ದಿನದ ಕಾರ್ಯಾಗಾರ ಹಾಗೂ ಉಪನ್ಯಾಸಗಳು ಜರುಗುವುದು. ಈ ಕಾರ್ಯಗಾರಗಳಲ್ಲಿ ಅನೇಕ ಸಂಪನ್ಮೂಲ ವ್ಯಕ್ತಿಗಳು ವಿಷೇಶ ಉಪನ್ಯಾಸಗಳÀನ್ನು ನೀಡುವರು.
ಈ ಎರಡು ಕಾರ್ಯಗಾರಗಳಲ್ಲಿ ಅನೇಕ ಗಣ್ಯವ್ಯಕ್ತಿಗಳು, ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿ ವಿಷೇಶ ಉಪನ್ಯಾಸಗಳನ್ನು ನೀಡಲಿದ್ದಾರೆ.
ಮಹಾವಿದ್ಯಾಲಯದ ಅಧ್ಯಕ್ಷರಾದ ಶ್ರೀ ಯೆಚರೆಡ್ಡಿ ಸತೀಶ್, ಸದಸ್ಯರಾದ ಶ್ರೀ ವಿ. ನಂದೀಶ ಹಾಗೂ ಎಂ ಹನುಮಂತಪ್ಪ, ಪ್ರಾಂಶುಪಾಲರಾದ ಡಾ|| ಕೆ. ವೀರೇಶ್, ಇವರು ಭಾಗವಹಿಸುವರು.
ಎಲ್ಲಾ ವಿಭಾಗದ ಮುಖ್ಯಸ್ಥರುಗಳು, ಭೋಧಕ ಭೋಧಕೇತರರ ಸಿಬ್ಬಂದಿಯವರು ಹಾಗೂ ವಿದ್ಯಾರ್ಥಿವೃಂದದವರೂ, ಹಾಜರಾಗುವರು.
ಈ ಎರಡು ಕಾರ್ಯಗಾರಕ್ಕೆ ತಾವೆಲ್ಲರೂ ಭಾಗವಹಿಸಬೇಕೆಂದು ಆಹ್ವಾನಿಸುತ್ತಿದ್ದೇವೆ.
