ಪರಿಸರಸ್ನೇಹಿ ವಿದ್ಯುತ್ ಉತ್ಪಾದನೆಗೆ ಆದ್ಯತೆ ಅನಿವಾರ್ಯ
ಮೈಕೇಲ್ ಫ್ಯಾರಡೇಯ ೨೨೫ನೇ ಜನ್ಮ ದಿನಾಚರಣೆ
ಏರುತ್ತಲೇ ಇರುವ ವಿದ್ಯುತ್ತಿನ ಬೇಡಿಕೆ ಪೂರೈಸಲು ಪರಿಸರಸ್ನೇಹಿ ಹಾಗೂ ನವೀಕರಿಸಬಹುದಾದ ಶಕ್ತಿಮೂಲಗಳ ಬಳಕೆ ಅನಿವಾರ್ಯ ಎಂದು
ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೆಂದ್ರದ ಸಹಾಯಕ ಜನರಲ್ ಮ್ಯಾನೇಜರ್ ಮಹಾದೇವಪ್ಪ ಅಭಿಪ್ರಾಯಪಟ್ಟರು.
ಅವರು ಬಳ್ಳಾರಿಯ ರಾವ್ ಬಹದ್ದೂರ್ ವೈ.ಮಹಾಬಲೇಶ್ವರಪ್ಪ
ಎಂಜಿನೀಯರಿಂಗ್ ಕಾಲೇಜಿನ ವಿದ್ಯುತ್ ವಿಭಾಗದಿಂದ ಮೈಕೇಲ್ ಫ್ಯಾರಡೇಯ ೨೨೫ನೇ ಜನ್ಮ ದಿನಾಚರಣೆಯ
ಅಂಗವಾಗಿ ಆಯೋಜಿಸಲಾಗಿದ್ದ ‘ವಿದ್ಯುತ್ಸವ-೨೦೧೬’ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ
ಮಾತನಾಡುತ್ತಿದ್ದರು.
ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೆಂದ್ರದಲ್ಲಿ ನೀರಿನ
ಕೊರತೆಯಿಂದ ಒಂದು ಉತ್ಪಾದನಾ ಘಟಕವನ್ನು ಸ್ಥಗಿತಗೊಳಿಸಲಾಗಿದೆ.
ನಮ್ಮ ವಿದ್ಯುತ್ ಪರಿಸ್ಥಿತಿಯ ಸಮಗ್ರ ಸುಧಾರಣೆಗೆ ನೂತನ ಸಾಧ್ಯತೆಗಳನ್ನು ಶೋಧಿಸಬೇಕಾಗಿದೆ.
ಇಂದಿನ ಯುವಜನಾಂಗ ಫ್ಯಾರಡೇಯಂತಹ ವಿಜ್ಞಾನಿ,
ತಂತ್ರಜ್ಞರನ್ನು ತಮ್ಮ ಆದರ್ಶ ಮಾದರಿಗಳನ್ನಗಿಸಿಕೊಳ್ಳಬೇಕು. ನೂತನ ಅವಿಷ್ಕಾರಗಳತ್ತ ತುಡಿಯುವ ತಾಂತ್ರಿಕ
ವಿದ್ಯಾರ್ಥಿಗಳು ಯಶಸ್ಸು ಸಾಧಿಸುತ್ತಾರೆ ಎಂದು ಅವರು ನುಡಿದರು.
ಸಮಾರಂಭದ ಮತ್ತೋರ್ವ ಮುಖ್ಯ ಅತಿಥಿಗಳಾದ ಕೆಪಿಟಿಸಿಎಲ್
ಕಾರ್ಯನಿರ್ವಾಹಕ ಎಂಜಿನಿಯರ್ ಎಚ್.ರಮೇಶ್ ವಿದ್ಯುತ್ ಪ್ರಸರಣದ ಇತ್ತೀಚಿನ ಬೆಳವಣಿಗೆಗಳ ಕುರಿತು ಮಾತನಾಡಿದರು.
ಸಮಾರಂಭದ
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ. ಯೆರ್ರಣ್ಣಗೌಡರ್ ಮಾತನಾಡಿ ವಿದ್ಯುಚ್ಚಕ್ತಿಯ
ಉಳಿತಾಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದರು ಉಪಪ್ರಾಂಶುಪಾಲರಾದ ಡಾ. ಸವಿತಾ ಸೋನೋಳಿ
ವಿದ್ಯುತ್ಸವ್ ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. .
ಆರಂಭದಲ್ಲಿ ವಿದ್ಯುತ್ ವಿಭಾಗದ ಮುಖ್ಯಸ್ಥ ಡಾ.ಎಸ.ಎಂ.ಶಶಿಧರ್ ಸ್ವಾಗತಿಸಿ ವಿದ್ಯುತ್ಸವ
ಕಾರ್ಯಕ್ರಮದ ಆಶಯ ವಿವರಿಸಿದರು. ಕು. ಕೀರ್ತಿ, ಸಾಗರ್,
ನಿರೂಪಣೆ ಮಾಡಿದರು. ಕು. ಕವಿತಾ ವಂದಿಸಿದರು.