ಬೆಂಗಳೂರು:ರಾಜ್ಯದಲ್ಲಿರುವ ಸ್ವಾಯತ್ತ ಎಂಜಿನಿಯರಿಂಗ್ ಕಾಲೇಜುಗಳು ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಅಧೀನದ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಅಂಕ ನೀಡಲು ವಿಭಿನ್ನ ಮಾನದಂಡ ಅನುಸರಿಸಲಾಗುತ್ತಿದೆ. ಇದರಿಂದಾಗಿ ವಿಟಿಯು ವ್ಯಾಪ್ತಿ ಕಾಲೇಜುಗಳ ಪದವೀಧರರು ಸರ್ಕಾರಿ ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ ಎಂಬ ಕೂಗು ಕೇಳಿ ಬಂದಿದೆ.
ವಿಟಿಯು ವ್ಯಾಪ್ತಿಯಲ್ಲಿ 185 ಎಂಜಿನಿಯರಿಂಗ್ ಕಾಲೇಜುಗಳಿವೆ. ಇವುಗಳಲ್ಲದೆ, ಸ್ವಾಯತ್ತ ಎಂಜಿನಿಯರಿಂಗ್ ಕಾಲೇಜುಗಳು 16.ಸ್ವಾಯತ್ತ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಅಂಕಗಳ ಬದಲು ‘ಗ್ರೇಡ್’ (ಶ್ರೇಣಿ) ನೀಡಲಾಗುತ್ತದೆ. ವಿಟಿಯು ಅಧೀನದ ಕಾಲೇಜುಗಳಲ್ಲಿ ‘ಶೇಕಡಾವಾರು’ ಅಂಕಗಳ ಮಾನದಂಡ ಚಾಲ್ತಿಯಲ್ಲಿದೆ.ಹೆಚ್ಚು ಅಂಕ: ಗ್ರೇಡ್ ಮಾನದಂಡವನ್ನು ಶೇಕಡಕ್ಕೆ ಪರಿವರ್ತನೆ ಮಾಡಲು ಒಂದು ಗಣಿತ ಸೂತ್ರವನ್ನು ಅನುಸರಿಸಲಾಗುತ್ತದೆ. (ಸೂತ್ರ: ಗ್ರೇಡ್ ಪಾಯಿಂಟ್–0.75X10).ಗ್ರೇಡ್‌ನಿಂದ ಶೇಕಡ ಅಂಕಗಳಿಗೆ ಪರಿವರ್ತನೆ ಮಾಡಿದಾಗ, ನಿಖರ ಶೇಕಡಾವಾರು ಅಂಕದ ಬದಲು ಸರಾಸರಿ ಶೇಕಡಾವಾರು ಅಂಕಗಳು ಸಿಗುತ್ತವೆ. ಇವು ನಿಖರ ಅಂಕಗಳಿಗಿಂತ ಶೇ 5ರಿಂದ8ರಷ್ಟು ಹೆಚ್ಚಾಗಿರುತ್ತವೆ ಎಂಬುದು ಸಾಮಾನ್ಯ ಎಂಜಿನಿಯರಿಂಗ್ ಪದವೀಧರರ ಅಳಲು.
ಅನ್ಯಾಯ ಹೇಗೆ?:ಇತ್ತೀಚೆಗೆ ಸರ್ಕಾರದ ವಿವಿಧ ಇಲಾಖೆಗಳು ಎಂಜಿನಿಯರ್‌ಗಳನ್ನು ನೇರ ನೇಮಕಾತಿ ಮೂಲಕ ನೇಮಕ ಮಾಡಿಕೊಳ್ಳುತ್ತಿವೆ. ಅಂದರೆ, ಅಭ್ಯರ್ಥಿಗಳು ಪಡೆದಿರುವ ಅಂಕಗಳ ಆಧಾರದಲ್ಲಿ ನೇರ ಸಂದರ್ಶನದ ಮೂಲಕ ನೇಮಕಾತಿ ನಡೆಯುತ್ತದೆ. ಹಾಗಾಗಿ, ಅಭ್ಯರ್ಥಿಗಳು ಎಂಜಿನಿಯರಿಂಗ್ ಪದವಿಯಲ್ಲಿ ಪಡೆದಿರುವ ಶೇಕಡಾವಾರು ಅಂಕಗಳು ಮುಖ್ಯವಾಗುತ್ತವೆ.ಗ್ರೇಡ್‌ನಲ್ಲಿ ಫಲಿತಾಂಶ ಪಡೆಯುವಸ್ವಾಯತ್ತ ಎಂಜಿನಿಯರಿಂಗ್ ಕಾಲೇಜುಗಳ ಪದವೀಧರರು, ಶೇಕಡಾವಾರುಅಂಕಗಳಿಗೆ ಬಂದಾಗ ಸಾಮಾನ್ಯ ಕಾಲೇಜುಗಳ ಪದವೀಧರರಿಂದ ಮುಂದಿರುತ್ತಾರೆ. ಇದರಿಂದಾಗಿ ನೇರನೇಮಕಾತಿಯಲ್ಲಿ ಅವರಿಗೆ ಹೆಚ್ಚು ಅನುಕೂಲವಾಗುತ್ತದೆ.ಅಂಕಿ ಅಂಶ: ಪದವೀಧರರ ಆರೋಪಕ್ಕೆ ಪೂರಕವೆಂಬಂತೆ, ಇತ್ತೀಚೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನೇರ ನೇಮಕಾತಿ ವಿಧಾನದಲ್ಲಿ ನೇಮಕ ಮಾಡಿಕೊಂಡಿರುವ 207 ಕಿರಿಯ ಸಿವಿಲ್ ಎಂಜಿನಿಯರ್‌ಗಳ ಪೈಕಿ 174 ಮಂದಿ ಸ್ವಾಯತ್ತ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಪದವಿ ಪಡೆದವರು. 33 ಮಂದಿ ಮಾತ್ರ ಇತರ ಕಾಲೇಜಿನವರು.‘ಕಳೆದ ವರ್ಷವೂ ಇದೇ ರೀತಿ ಆಗಿತ್ತು. ಲೋಕೋಪಯೋಗಿ ಇಲಾಖೆ 100 ಮಂದಿ ಸಿವಿಲ್ ಎಂಜಿನಿಯರ್‌ಗಳನ್ನು ನೇರ ನೇಮಕಾತಿ ಮಾಡಿತ್ತು. ಈ ಪೈಕಿ 76 ಮಂದಿ ಸ್ವಾಯತ್ತ ಎಂಜಿನಿಯರಿಂಗ್‌ಕಾಲೇಜುಗಳ ವಿದ್ಯಾರ್ಥಿಗಳು’ ಎಂದುಶಿವಮೊಗ್ಗದ ವಿಜಯ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪರೀಕ್ಷೆ ನಡೆಸಿ:‘ಗ್ರಾಮೀಣ ಭಾಗದ ಬಹುಪಾಲು ವಿದ್ಯಾರ್ಥಿಗಳು ಸಾಮಾನ್ಯ ಎಂಜಿನಿಯರಿಂಗ್ ಕಾಲೇಜುಗಳಲ್ಲೇ ಕೋರ್ಸ್ ಮಾಡುತ್ತಾರೆ. ಬೇರೆ ಬೇರೆ ಕಾರಣಗಳಿಗೆ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿರಬಹುದು. ಆದರೆ, ಆ ಕಾರಣಕ್ಕೆ ಅವರು ಸರ್ಕಾರಿ ಉದ್ಯೋಗದಿಂದ ವಂಚಿತರಾಗುವುದು ಎಷ್ಟು ಸರಿ? ಇಲಾಖೆಗಳು ನೇರ ನೇಮಕಾತಿ ವಿಧಾನಕ್ಕೆ ಜೋತು ಬೀಳದೆ, ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿ ನಡೆಸಲಿ’ ಎಂದು ಅವರು ಒತ್ತಾಯಿಸಿದರು.
ಸಚಿವರಿಗೆ ವಿಟಿಯು ಪತ್ರ: ಗ್ರಾಮೀಣಾಭಿವೃದ್ಧಿ ಇಲಾಖೆ ಈ ವರ್ಷಾರಂಭದಲ್ಲಿ ಕಿರಿಯ ಎಂಜಿನಿಯರಿಂಗ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದ ಸಂದರ್ಭದಲ್ಲಿ ವಿಟಿಯು ಕುಲಸಚಿವರು ಸಚಿವ ಎಚ್.ಕೆ. ಪಾಟೀಲ ಅವರಿಗೆ ಪತ್ರ ಬರೆದು, ಸಾಮಾನ್ಯ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದ್ದರು.ಎಲ್ಲ ಎಂಜಿನಿಯರಿಂಗ್ ಪದವೀಧರರಿಗೆ ನ್ಯಾಯ ಒದಗಿಸುವುದಕ್ಕಾಗಿ ಸಾಮಾನ್ಯ ಪ್ರವೇಶ ಪರೀಕ್ಷೆ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವಂತೆಯೂ ಮನವಿ ಮಾಡಿದ್ದರು.
ದೂರು:ವಿಜಯಕುಮಾರ್ ಅವರು ಈ ವಿಚಾರವನ್ನು ಪತ್ರ ಮುಖೇನ ರಾಷ್ಟ್ರಪತಿ, ಪ್ರಧಾನಿ, ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾರೆ.