ರಾವ್ ಬಹದ್ದೂರ್ ವೈ.ಮಹಾಬಳೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯ,
ದಂಡು ಪ್ರದೇಶ, ಬಳ್ಳಾರಿ
ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ದಿನಾಂಕ 30.09.2015, ಬುದವಾರರಂದು, ನಮ್ಮ ಮಹಾವಿದ್ಯಾಲಯದ ಪೋಸ್ಟ್ ಗ್ರಾಜುಯೇಷನ್ ಕೋರ್ಸಗಳಾದ ಎಂ.ಸಿ.ಎ, .ಬಿ.ಎ,
ಥರ್ಮಲ್ ಪವರ್ ಇಂಜನೀಯರಿಂಗ್, ಪ್ರೊಡಕ್ಷನ್ ಮ್ಯಾನೇಜ್‍ಮೆಂಟ್, ಡಿಜಿಟಲ್ ಕಮ್ಯೂನಿಕೇಷನ್ ಮತ್ತು ನೆಟ್ ವರ್ಕಿಂಗ್, ಕಂಪ್ಯೂಟರ್ ಸೈನ್ಸ್ ಇಂಜನೀಯರಿಂಗ್ ಮತ್ತು ಸ್ಟ್ರಕ್ಚರಲ್ ಇಂಜನೀಯರಿಂಗ್ ಇವುಗಳ ಪ್ರಾರಂಭೋತ್ಸವದ ಅಂಗವಾಗಿ “ಫ್ರೆಶರ್ಸ್ ದಿನಾಚರಣೆ”ಯನ್ನು ಆಯೋಜಿಸಲಾಗಿದೆ.
ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ, ಶ್ರೀ ವಿಜಯ್ ಲಾಲ್ ಮೀನ , ಬಳ್ಳಾರಿ, ಇವರು ಆಗಮಿಸುವರು. ಅವರಿಂದ ವಿದ್ಯಾರ್ಥಿಗಳಿಗೆ ಮುಂದಿನ ಜೀವನದ ಭವಿಷ್ಯತ್ತಿಗಾಗಿ ಕೆಲವು ಸೂಕ್ತ ಸಲಹೆ, ಮಾರ್ಗದರ್ಶನಗಳನ್ನು ನೀಡುವರು.
ವೀ.ವಿ.ಸಂಘದ ಅಧ್ಯಕ್ಷರಾದ ಶ್ರೀ ಅಲ್ಲಂ ಬಸವರಾಜ, ಉಪಾಧ್ಯಕ್ಷ ಹಾಗೂ ಕಾಲೇಜಿನ ಅಧ್ಯಕ್ಷರಾದ ಶ್ರೀ ಏಚರೆಡ್ಡಿ ಸತೀಶ್, ಕಾರ್ಯದರ್ಶಿಗಳಾದ ಶ್ರೀ ನಾಡಗೌಡರ ರುದ್ರಗೌಡ, ಸಹಕಾರ್ಯದರ್ಶಿಗಳಾದ ಶ್ರೀ ಐಗೋಳ ಚಿದಾನಂದ, ಕೋಶಾಧಿಕಾರಿ ಶ್ರೀ. ಎಮ್ ಮುಪ್ಪಣ್ಣ ನಮ್ಮ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಹನುಮಂತಪ್ಪ, ಮತ್ತು ಶ್ರೀ ನಂದೀಶ್, ಭಾಗವಹಿಸುವರು.
ಹಾಗು ಎಲ್ಲಾ ವಿಭಾಗದ ಮುಖ್ಯಸ್ಥರುಗಳು, ಭೋಧಕ, ಭೋಧಕೇತರರ ಸಿಬ್ಬಂದಿಯವರು ಹಾಗೂ ವಿದ್ಯಾರ್ಥಿವೃಂದದವರೂ,
ಈ ಶುಭ ಸಂದರ್ಭಕ್ಕೆ ತಮ್ಮನ್ನು ಹಾರ್ದಿಕವಾಗಿ ಸ್ವಾಗತಿಸುತ್ತೇವೆ.
ಧನ್ಯವಾದಗಳೊಂದಿಗೆ,
-ಡಾ|| ಕೆ. ವೀರೇಶ್, ಪ್ರಾಂಶುಪಾಲರು, ಆರ್.ವೈ.ಎಂ.ಇ.ಸಿ, ಬಳ್ಳಾರಿ